ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತು, ಬೆಂಗಳೂರು
-
- ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತನ್ನು ಕೇಂದ್ರದ ವಕ್ಫ್ ಪರಿಷತ್ತಿನ ಮಾದರಿಯಲ್ಲಿ ಸರ್ಕಾರದ ಆದೇಶ ಸಂಖ್ಯೆ RD 06 WGA 1991, ದಿನಾಂಕ 27.03.1992 ರನ್ವಯ ಸ್ಥಾಪಿಸಲಾಯಿತು.
-
- ಉದ್ದೇಶಗಳು: ರಾಜ್ಯದಲ್ಲಿರುವ ವಕ್ಫ್ ಸಂಸ್ಥೆಗಳ ಅಭಿವೃಧ್ಧಿಗಾಗಿ ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ವತಿಯಿಂದ ವಾಣಿಜ್ಯ ಸಂಕೀರ್ಣಗಳು / ಶಾದಿ ಮಹಲ್ ಗಳು / ಹಾಸ್ಟೆಲ್ ಕಟ್ಟಡಗಳನ್ನು ಕಟ್ಟಲು ಸಾಲವನ್ನು ಕೆಲವು ಷರತ್ತುಗಳಿಗೊಳಪಟ್ಟು ಮಂಜೂರು ಮಾಡಲಾಗುವುದು. ಸದರಿ ಸಾಲವನ್ನು ಯೋಜನೆಯ ಅಂದಾಜು ವೆಚ್ಚದ 75% ರಷ್ಟು ಹಾಗೂ ಗರಿಷ್ಠ ರೂ. 100.00 ಲಕ್ಷಗಳ ಸಾಲವನ್ನು ಪ್ರಗತಿ ವರದಿ / ಬಳಕೆ ಪ್ರಮಾಣಪತ್ರ ಮತ್ತು ಯೋಜನೆಯ ಛಾಯಾಚಿತ್ರಗಳ ಆಧಾರದ ಮೇಲೆ 2 ರಿಂದ 5 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
- ಸಾಲ ಪಡೆದ ಸಂಸ್ಥೆರವರು ಕಟ್ಟಡ ಕಾಮಗಾರಿಯನ್ನು ಎರಡು ವರ್ಷಗಳೊಳಗೆ ಪೂರ್ಣಗೊಳಿಸಿ ಸಾಲದ ಮೊತ್ತದೊಂದಿಗೆ ಶೇ 5 ರಷ್ಟು ವೆಲ್‌ಫೇರ್ ಸೆಸ್‌ರೊಂದಿಗೆ 5-10 ವರ್ಷಗಳ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗಿರುತ್ತದೆ
-
-
- ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಯಾಗಿರುವ ವಕ್ಫ್ ಸಂಸ್ಥೆಗಳು ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ವತಿಯಿಂದ ಸಾಲ ಪಡೆಯಲು ಅರ್ಹವಿರುತ್ತವೆ.
-
-
- ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನಲ್ಲಿ ಮುಸ್ಲಿಂ ಪುರುಷರು ಮತ್ತು ಗಂಡು ಮಕ್ಕಳಿಗೆ ವೈದ್ಯಕೀಯ ಪರಿಹಾರ ಯೋಜನೆಯು ಅಸ್ತಿತ್ವದಲ್ಲಿದೆ. ಈ ಯೋಜನೆಯಡಿ, ಹೃದಯ, ಮೂತ್ರಪಿಂಡ, ಕ್ಯಾನ್ಸರ್, ಶ್ವಾಸಕೋಶ, ಯಕೃತ್ತು, ನರ ಮತ್ತು ಮೆದುಳು ಮುಂತಾದ ಪ್ರಮುಖ ಕಾಯಿಲೆಗಳ ಚಿಕಿತ್ಸೆಗಾಗಿ ಮುಸ್ಲಿಂ ಪುರುಷರು ಮತ್ತು ಗಂಡು ಮಗುವಿಗೆ ಗರಿಷ್ಠ 2.00 ಲಕ್ಷ ರೂ.ಗಳ ವೈದ್ಯಕೀಯ ಪರಿಹಾರವನ್ನು ಮಂಜೂರು ಮಾಡಲಾಗುವುದು ಮತ್ತು ಸರ್ಕಾರಿ ಎಂಪಾನೆಲ್ಡ್ ಮಾಡಿರುವ / ಎಂಪಾನೆಲ್ ಮಾಡದ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲಾಗುವುದು.
-
- ಪ್ರತಿ ವರ್ಷ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿನ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅನುದಾನವನ್ನು ಮಂಜೂರು ಮಾಡುತ್ತಿದೆ.
- 2024-25ನೇ ಸಾಲಿಗೆ ಕರ್ನಾಟಕ ರಾಜ್ಯ ವಕ್ಫ್ ಪರಿಷತ್ತಿಗೆ ರೂ. 250.00ಲಕ್ಷಗಳ ಅನುದಾನವನ್ನು ಮಂಜೂರು ಮಾಡಿ ಬಿಡುಗಡೆಗಳಿಸಲಾಗಿರುತ್ತದೆ.